ರಾಷ್ಟ್ರ ಪ್ರೇಮಿ ಕವಿ ಅಲ್ಲಾಮ ಇಕ್ಬಾಲ್

S M H ಬರ್ನಿಯವರ ಇಂಗ್ಲೀಷ್ ಕೃತಿಯನ್ನು ಕೊ.ಚೆನ್ನಬಸಪ್ಪರು ಕನ್ನಡಕ್ಕೆ ಅನುವಾದಿಸಿದ "ರಾಷ್ಟ್ರ ಪ್ರೇಮಿ ಕವಿ ಅಲ್ಲಾಮ ಇಕ್ಬಾಲ್" ಎಂಬ ಪುಸ್ತಕ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ಮಹಾನ್ ಕವಿಯೋರ್ವರ ಆತ್ಮ ಚರಿತ್ರೆಯಾಗಿದೆ.

ಕೃತಿ ವಾಚಕರಿಗೆ ಅಲ್ಲಾಮ ಇಕ್ಬಾಲರ ಸಂಪೂರ್ಣ ಜೀವನವನ್ನು ದರ್ಶಿಸಲು ಸಾಧ್ಯವಾಗುವ ಅಮೂಲ್ಯವಾದ  ಬರಹಗಳಲ್ಲೊಂದು ಎನ್ನುವುದು ನಿಸ್ಸಂದೇಹ.

 ದೇಶ ಪ್ರೇಮದ ಮೂರ್ತಿರೂಪವಗಿದ್ದ ಇಕ್ಬಾಲರು ಜೀವನದುದ್ದಕ್ಕೂ ಅನುಭವಿಸಿದ ತ್ಯಾಗಮಯವಾದ ಜೀವನವನ್ನು ಎಳೆ ಎಳೆಯಾಗಿ ಬಿಡಿಸಿದ ಕೃತಿಯು ವಿಸ್ಮಯದ ಮತ್ತೊಂದು ಬಾಗಿಲು ವಾಚಕರಿಗೆ ತೆರೆದು ಕೊಡುತ್ತದೆ...!

  ತನ್ನ ಕವಿತೆಯ ನೈಪುನ್ಯತೆಯಿಂದ ಭಾರತದ ಗಲ್ಲಿ ಗಲ್ಲಿಗಳಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ದೇಶ ಸ್ನೇಹದ ಪಾಠ ಭೋದಿಸಿದ ಇಕ್ಬಾಲರ ಹಲವಾರು ಕವಿತೆಗಳ ಸಂಗ್ರಹ ಪುಸ್ತಕದ ಸೌಂದರ್ಯಕ್ಕೆ ಹೊಸ ಮೆರಗು ನೀಡಿದೆ. ‘ಸಾರೇ ಜಹಾಂ ಸೇ ಅಚ್ಚಾ.. ಹಿಂದೂ ಸಿತಾನ್ ಹಮಾರಎಂಬ ಸರಿಸಾಟಿಯಿಲ್ಲದ ಅವರ ಕವಿತೆ ಉಂಟುಮಾಡಿದ ಕ್ರಾಂತಿ ಅವರ್ಣನೀಯ.

ಅದರ ವಿವರಣೆ ಅದ್ಭುತಗಳ ಆಗರಗಳತ್ತ ಕೊಂಡೊಯ್ಯುತ್ತದೆ. ಸ್ವದೇಶಿ ಚಳುವಳಿಯ ಬೆಂಬಲಿಗರಾಗಿ ನಿಂತಿದ್ದ ಇಕ್ಬಾಲರ ಸಂದೇಶಗಳ ತಪ್ಪು ಭಾವನೆಗಳನ್ನು ಹೊಗಾಳಾಡಿಸುತ್ತಾ ಜಾತಿ,ಮತ ಪಂಥ ಮತ್ತು ಪ್ರಾದೇಶಿಕತೆಯ ವಿಚಾರವಾಗಿ ಅವರು ಮಂಡಿಸಿದ ವಿಷಯಗಳ ಸಂಪೂರ್ಣ ಮಾಹಿತಿಗಳನ್ನು ಓದುಗರಿಗೆ ಸಮರ್ಪಿಸುತ್ತಿದೆ. ಮಸ್ಲಿಂ ಲೀಗಿನ ಅಧ್ಯಕ್ಷರಾಗಿ ಅವರು ನಡೆಸಿದ ಭಾಷಣಗಳು, ಹಿಂದೂ ಮುಸ್ಲಿಮರ ಒಗ್ಗಟ್ಟಿಗಾಗಿ ಆಹೋರಾತ್ರಿ ಅವಿಶ್ರಾಂತವಾಗಿ ಅವರು ನಡೆಸಿದ ಕ್ರಾಂತಿಗಳು, ಮುಸ್ಲಿಮರ ಹಕ್ಕುಗಳಿಗಾಗಿ ನಡೆಸಿದ ಸ್ಮರಣೀಯ ಧರಣಿಗಳನ್ನು ಪುಸ್ತಕ ಮೆಲುಕು ಹಾಕುತ್ತದೆ. ‘ಭವಿಷ್ಯದಲ್ಲಿ ಜನ ಬಾಹುಳ್ಯದ ದೃಷ್ಠಿಯಲ್ಲಿ ಬಹುಸಂಖ್ಯಾತ ಹಿಂದೂಗಳಿಂದ  ಮುಸ್ಲಿಮರಿಗೆ ತೊಂದರೆಗಳು ಸಮೀಪಿಸಬಾರದುಎಂಬ ನಿಟ್ಟಿನಲ್ಲಿ ಅವರು ನೀಡಿದ ಹೇಳಿಕೆಗಳೆಲ್ಲವನ್ನು ಲೇಖಕರು ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

 ಇಕ್ಬಾಲರ ಜೀವನದ ಕೊನೆ ಗಳಿಗೆಯಲ್ಲಿ ಅವರು ಪಡೆದ ಯಾತನೆ, ಕಹಿ ಅನುಭವಗಳನ್ನು ಮನಮುಟ್ಟುವಂತೆ ಲೇಖಕರು ವರ್ಣಿಸಿದ್ದಾರೆ.

 

ಮುಹಮ್ಮದ್ ತಂಶೀರ್ ಕಾಜೂರ್

x

ಕಾಮೆಂಟ್‌ಗಳು